ತಾಯಿಯ ಪ್ರೀತಿ ಕಾಳಜಿಗೆ ಹೇಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹೇಗೋ, ಮಕ್ಕಳು ಕೂಡ ತಮ್ಮ ವಯಸ್ಸಾದ ತಂದೆ ತಾಯಿಯನ್ನು ಕಾಳಜಿಯಿಂದ ನೋಡಿಕೊಳ್ಳುವ ಕೆಲ ದೃಶ್ಯಗಳು ಹೃದಯಕ್ಕೆ ತಟ್ಟುತ್ತವೆ. ವ್ಯಕ್ತಿಯೋರ್ವ ವಯಸ್ಸಾದ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿರುವ ಹೃದಯ ಸ್ಫರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.