ನಾ ಡ್ರೈವರಾ: ಯೂಟ್ಯೂಬ್​ಗೂ ಮೊದಲು ಟ್ರ್ಯಾಕ್ಟರ್​ನಲ್ಲೇ ವೈರಲ್​ ಆಗಿತ್ತು ಈ ಗಾಯಕನ ಸಾಂಗ್​

ಉತ್ತರ ಕರ್ನಾಟಕದಲ್ಲಿ ಮಾಳು ನಿಪನಾಳ ಎಂದರೆ ಸಿಕ್ಕಾಪಟ್ಟೆ ಫೇಮಸ್​. ಇಡೀ ಕರುನಾಡಿನ ಮಂದಿಗೆ ಮಾಳು ನಿಪನಾಳ ಎಂದರೆ ತಕ್ಷಣಕ್ಕೆ ಗೊತ್ತಾಗದೇ ಇರಬಹುದು. ಆದರೆ ‘ನಾ ಡ್ರೈವರಾ... ನೀ ನನ್ನ ಲವ್ವರಾ..’ ಹಾಡು ಖಂಡಿತವಾಗಿಯೂ ಗೊತ್ತಿರುತ್ತದೆ. ಅಷ್ಟರಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಹವಾ ಎಬ್ಬಿಸಿದೆ. ರೀಲ್ಸ್​ನಲ್ಲಿ ಈ ಹಾಡಿನ ಕ್ರೇಜ್​ ದೊಡ್ಡ ಮಟ್ಟಕ್ಕೆ ಹಬ್ಬಿದೆ. ಸಖತ್​ ವೈರಲ್​ ಆದ ಈ ಗೀತೆ ಗಾಯಕರೇ ಮಾಳು ನಿಪನಾಳ. ಅಪ್ಪಟ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ಅವರು. ಮಾಳು ನಿಪನಾಳ ಅವರು ಹಾಡಿದ ‘ನಾ ಡ್ರೈವರಾ... ನೀ ನನ್ನ ಲವ್ವರಾ..’ ಸಾಂಗ್​ ಸೂಪರ್​ ಹಿಟ್​ ಆಗಿದೆ. ಯೂಟ್ಯೂಬ್​ನಲ್ಲಿಯೇ ಈ ಹಾಡು ಬರೋಬ್ಬರಿ 11.7 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಶಾಸ್ತ್ರೀಯವಾಗಿ ಸಂಗೀತ ಕಲಿಯದೇ ಇದ್ದರೂ ಕೂಡ ಅವರು ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.